ಆರೋಗ್ಯಕರ ಜೀವನಕ್ಕೆ Fitness ಯಾಕೆ ಮುಖ್ಯ? Fitness ಕಾಪಾಡಿಕೊಳ್ಳುವ ಸರಳ ಸಲಹೆಗಳು
Fitness Tips for Body and Mind Health ಇಂದಿನ ಕಾಲದಲ್ಲಿ ಫಿಟ್ನೆಸ್ (Fitness) ಎಂಬ ಪದವನ್ನು ನಾವು ಬಹಳ ಹೆಚ್ಚು ಕೇಳುತ್ತೇವೆ. ಆದರೆ ಫಿಟ್ನೆಸ್ ಎಂದರೇನು ಮತ್ತು ಅದು ಯಾಕೆ ಮುಖ್ಯ ಎಂಬುದನ್ನು ಹಲವರಿಗೆ ಸರಿಯಾಗಿ ಗೊತ್ತಿಲ್ಲ. ಫಿಟ್ನೆಸ್ ಅಂದರೆ ಕೇವಲ ದೇಹ ಸಣ್ಣವಾಗಿರುವುದು ಅಥವಾ ಜಿಮ್ ಹೋಗುವುದು ಅಲ್ಲ. ದೇಹ, ಮನಸ್ಸು ಮತ್ತು ಜೀವನಶೈಲಿ ಎಲ್ಲವೂ ಸಮತೋಲನದಲ್ಲಿ ಇದ್ದರೆ ಅದನ್ನು ಫಿಟ್ನೆಸ್ ಎಂದು ಹೇಳಬಹುದು. ಆರೋಗ್ಯಕರ ಜೀವನ ನಡೆಸಲು ಫಿಟ್ನೆಸ್ ತುಂಬಾ ಮುಖ್ಯವಾಗಿದೆ. ಫಿಟ್ನೆಸ್ Fitness ಉತ್ತಮವಾಗಿದ್ದರೆ ದೇಹದಲ್ಲಿ ಶಕ್ತಿ ಹೆಚ್ಚು ಇರುತ್ತದೆ. ದಿನವಿಡೀ ಕೆಲಸ ಮಾಡಿದರೂ ದಣಿವು ಕಡಿಮೆ ಆಗುತ್ತದೆ. ಪ್ರತಿದಿನ ವ್ಯಾಯಾಮ ಮಾಡುವುದು, ಸರಿಯಾದ ಆಹಾರ ತಿನ್ನುವುದು, ಸಾಕಷ್ಟು ನಿದ್ರೆ ಮಾಡುವುದು ಮತ್ತು ಒತ್ತಡ ಕಡಿಮೆ ಇಡುವುದು ಫಿಟ್ನೆಸ್ ಕಾಯ್ದುಕೊಳ್ಳಲು ಅಗತ್ಯ. ಇವುಗಳನ್ನು ನಿಯಮಿತವಾಗಿ ಮಾಡಿದರೆ ದೇಹ ಸದಾ ಆರೋಗ್ಯಕರವಾಗಿರುತ್ತದೆ. ಇಂದಿನ ಜನರು ಹೆಚ್ಚು ಸಮಯ ಕುಳಿತು ಕೆಲಸ ಮಾಡುತ್ತಾರೆ. ಕಂಪ್ಯೂಟರ್, ಮೊಬೈಲ್, ಟಿವಿ ಇವುಗಳ ಬಳಕೆ ಹೆಚ್ಚಾಗಿದೆ. ಇದರಿಂದ ದೇಹಕ್ಕೆ ಬೇಕಾದಷ್ಟು ಚಲನೆ ಸಿಗುವುದಿಲ್ಲ. ಇದರಿಂದ ತೂಕ ಹೆಚ್ಚಾಗುವುದು, ಬೆನ್ನು ನೋವು, ಕುತ್ತಿಗೆ ನೋವು, ಮಧುಮೇಹ, ರಕ್ತದೊತ್ತಡ ಇಂತಹ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಫಿಟ್ನೆಸ್ Fitness ಕಾಪಾಡಿಕೊಳ್ಳಲು ಪ್ರತಿ...