ಬೊಜ್ಜು ನಿಯಂತ್ರಣಕ್ಕೆ ಆಗಿ ಸಜ್ಜು
ಬೊಜ್ಜು ಮಕ್ಕಳಿಂದ ಹಿಡಿದು ವಯಸ್ಸಾದವರನ್ನು ಕಾಡುವ ಸಮಸ್ಯೆ.ಇತ್ತೀಚಿನ ದಿನಗಳಲ್ಲಿ ಬೊಜ್ಜು ಸಾಮಾನ್ಯವಾಗಿ ಬಿಟ್ಟಿದೆ. ವಯಸ್ಸಿನ ಮಿತಿ ಇಲ್ಲದೆ ಮಕ್ಕಳು ವಯಸ್ಕರು ವೃದ್ಧರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ. ಇದಕ್ಕೆ ಬದಲಾದ ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮ ಕಾರಣ. ಇಂದು ಆರೋಗ್ಯಕರ ಆಹಾರಕ್ಕಿಂತಲೂ ಆಕರ್ಷಕವಾಗಿ ಕಾಣುವುದೇ ಜಂಕ್ ಫುಡ್, ಫಾಸ್ಟ್ಫುಡ್. ಈ ಆಹಾರಗಳು ದೇಹದಲ್ಲಿ ಬೊಜ್ಜು ಹೆಚ್ಚಿಸಲು ಉತ್ತಜಿಸುತ್ತದೆ. ಬೇಕರಿ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಆಹಾರ,ಪಿಜ್ಜಾ, ತಂಪು ಪಾನೀಯ ಮುಂತಾದ ಆಹಾರ ಸೇವನೆ ಹೆಚ್ಚುತ್ತಿರುವುದರಿಂದಲೇ ಬೊಜ್ಜು ಸಮಸ್ಯೆ ಹೆಚ್ಚುತ್ತಿದೆ. ಬೊಜ್ಜಿಗೆ ಇತರೆ ಕಾರಣಗಳು? ಕೆಲವರಿಗೆ ಅರೋಗ್ಯ ಸಮಸ್ಯೆಯಿಂದಲು ದೇಹದ ತೂಕ ಹೆಚ್ಚುತ್ತಿರುತ್ತದೆ. ಥೈರೋಯಿಡ್, ಪಿಸಿಒಡಿ, ಹಾರ್ಮೋನ್ ಸಮಸ್ಯೆಯಿಂದಲು ದೇಹದ ತೂಕ ಹೆಚ್ಚಬಹುದು. ಇದಕ್ಕೆ ಆಹಾರದಲ್ಲಿ ನಿಯಂತ್ರದ ಜೊತೆಗೆ, ವೈದ್ಯರ ಸಲಹೆ ಮೇರೆಗೆ ದೇಹದ ತೂಕವನ್ನು ನಿಯಂತ್ರಣವನ್ನು ಇಡಬೇಕು. ಬೊಜ್ಜಿನಿಂದ ಉಂಟಾಗುವ ಅದ್ದಪರಿಣಾಮಗಳೇನು ? ದೇಹದ ಮುಕ್ಕಾಲು ಭಾಗದಷ್ಟು ಕಾಯಿಲೆಗೆ ಬೊಜ್ಜೇ ಪ್ರಮುಖ ಕಾರಣ. ಪ್ರಮುಖವಾಗಿ ಫ್ಯಾಟಿ ಲಿವರ್ ಆಗುವ ಸಾಧ್ಯತೆ ಇದ್ದು, ಇದರಿಂದ ಪಿತ್ತಜನಕಾಂಗ ತೊಂದರೆ ಬರಬಹುದು. ಇದರ ಕಾರ್ಯಕ್ಷೇಮತೆ ವಿಫಲವಾಗಲುಬಹುದು. ಜೊತೆಗೆ ಮಧುಮೇಹ, ಹೃದಯ ಸಮಸ್ಯೆ, ಬಿಪಿ, ಹೃದಯಾಘಾತ, ಸಂಧಿವಾತ, ಮಂಡಿನೋವು, ಉಸಿರಾಟದ ಸಮಸ್ಯೆ.ಸಂತಾನಹೀನತೆ, ಸೇರಿದ...